'ಚಂದ್ರಕಾಂತ್ ಟಿ.ಪಟೇಲ್'ರು, 'ಹತ್ತಿ ಅನುಸಂಧಾನ ಕ್ಷೇತ್ರ'ದಲ್ಲಿ ಹಲವಾರು ದಶಕಗಳಿಂದ ಕಾರ್ಯನಿರ್ವಹಿಸಿದ ವ್ಯಕ್ತಿ, 'ಸಿ.ಟಿ.ಪಟೇಲ್' ಎಂದೇ ರಾಷ್ತ್ರದಲ್ಲೆಲ್ಲಾ ಪ್ರಸಿದ್ಧರು.'ಹೈಬ್ರಿಡ್-೪', ಅಥವಾ 'ಸಂಕರ್-೪' ಯೆಂಬ ಹತ್ತಿ ತಳಿಯ ಆವಿಷ್ಯಕಾರರು. 'ಗುಜರಾತ್ ನ ಸೂರತ್ ಕೃಷಿ ಅನುಸಂಧಾನ ಹೊಲ'ದಲ್ಲಿ ಸುಮಾರು ೨ ದಶಕಗಳ ಸತತ ಪರಿಶ್ರಮದಿಂದ ಈ ಉಪಲಭ್ದಿಯನ್ನು ಅವರು 'ಹಾಸಿಲ್' ಮಾಡಲು ಸಾಧ್ಯವಾಯಿತು. ಹತ್ತಿಯ ಉತ್ಪಾದನೆ ೨೧೩ ರಿಂದ ೩೦೪ ಕೆ.ಜಿ.ಲಿಂಟ್ ಹತ್ತಿ/ಹೆಕ್ಟೇರ್ ವರಗೆ ಸಾಧಿಸಲು ಕಷ್ಟಪಡುತ್ತಿರುವಾಗ, ಪಟೇಲರು, ತಮ್ಮ ಹೊಲದಲ್ಲಿ, ೨,೩೫೨ ಕಿ.ಗ್ರಾಂ/ಹೆಕ್ಟೇರ್ ಲಿಂಟ್ ಹತ್ತಿಯನ್ನು ಉತ್ಪಾದಿಸಿದಾಗ ದೇಶದ ವೈಜ್ಞಾನಿಕರೆಲ್ಲಾ ಆಶ್ಚರ್ಯಚಕಿತರಾದರು. ಈ ತಳಿಯ 'ಉತ್ಪಾದನಾ ಸಾಮರ್ಥ್ಯ' ರಾಷ್ಟ್ರದ ಹಾಗೂ ವಿದೇಶಗಳ ವಿಜ್ಞಾನಿಗಳನ್ನು ಆನಂದ ಹಾಗೂ ಅಚ್ಚರಿಗೊಳಿಸಿತ್ತು. == ಇದನ್ನೂ ಓದಿ == ↑ , . , .; ' - ', . ; 12, 15 (1958) == ಉಲ್ಲೇಖಗಳು ==